ಸ್ಯಾಂಡ್ ವುಡ್ ದಾಖಲೆಗಳಿಗೆ ಭಾಷ್ಯವಿದು

  ಯಾವುದೇ ಒಂದು ಕ್ಷೇತ್ರಕ್ಕೂ ಆರಂಭ ಎನ್ನುವುದು‌ ಅತ್ಯಂತ ಮುಖ್ಯಮಾಗಿರುತ್ತದೆ. ಅಂತೆಯೇ ಅನೇಕ ಮೊದಲುಗಳಿಗೂ ಅವುಗಳು ಸಾಕ್ಷಿಯಾಗಿರುತ್ತದೆ. ಹಾಗೇ ಕನ್ನಡ ಸಿನಿಮಾ ರಂಗದಲ್ಲಿ ಅದೆಷ್ಟೋ ಸಿಮಾಗಳು ನಮ್ಮೆದುರು ಬಂದು ಹೋಗಿವೆ ಕೆಲವೊಂದು ಇನ್ನು ಮನದಲ್ಲಿ ಹಾಗೆ ಅಚ್ಚಳಿಯದಂತೆಯೆ ಉಳಿದಿವೆ. ಅವುಗಳಲ್ಲಿ ಕೆಲ ಸಿನಿಮಾಗಳು ಚಂದನವನಕ್ಕೆ ಹೊಸ ಆರಂಭವನ್ನು, ಹೊಸ ಭಾಷ್ಯವನ್ನು, ದಾಖಲೆಗಳನ್ನು ಮಾಡಿವೆ.ಅಂತಹ ಕೆಲವೊಂದು ವಿನೂತನ‌ ದಾಖಲೆಗಳನ್ನು, ಪ್ರಾರಂಭವನ್ನು ಮಾಡಿದಂತಹ ಚಿತ್ರಗಳು ಜನಮನದಲ್ಲಿ ಉಳಿದಿವೆ ಅಂತಹ ಕೆಲ‌ ಸಿನಿಮಾಗಳನ್ನು ನೀವು ಯಾವುದೆಂದು ನೋಡಿ.
   ಹೌದು ಎಲ್ಲದಕ್ಕೂ ಒಂದು ಪ್ರಾರಂಭ ಎನ್ನುವುದಿರುತ್ತದೆ ಹಾಗೇ ಸ್ಯಾಂಡಲ್ ವುಡ್  ನಲ್ಲಿ‌ ಮೊದಲು ತೆರೆಕಂಡ ಸಿನಿಮಾವೆಂದರೆ ಅದು 'ಮೃಚ್ಛಕಟಿಕ' ಇದು ಒಂದು ಮೂಕಿ ಚಿತ್ರವಾಗಿದ್ದು 1931ರಲ್ಲಿ ತೆರೆಕಂಡಿತ್ತು. ಆದರೆ ಮೊದಲ ಟಾಕಿ ಚಿತ್ರ ಎಂದರೆ ವೈ.ವಿ ರಾವ್ ನಿರ್ದೇಶನದ  'ಸತಿ ಸುಲೋಚನ' ಇದು 1934ರಲ್ಲಿ ತೆರೆಕಂಡಿದ್ದು ಇದರಲ್ಲಿ ಸುಬ್ಬಯ್ಯ ನಾಯ್ಡು ನಾಯಕನಾಗಿ ಅಭಿನಯಿಸಿದ್ದರು. ಆದರೆ ಈ ಚಿತ್ರದಿಂದ ಕನ್ನಡ ಸಿನಿರಂಗ ಪ್ರಾರಂಭವೆಂದು ಹೇಳುವುದು ಉಂಟು. 
   ಇ‌ನ್ನು   ಕನ್ನಡದ ಹೆಮ್ಮೆ ನಮ್ಮ ವರನಟ ರಾಜಕುಮಾರ್ ಕನ್ನಡ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದ ಮೊದಲ ಚಿತ್ರ 'ಬೇಡರಕಣ್ಣಪ್ಪ'. ಕನ್ನಡ ಸಿನಿಮಾ ಒಂದಕ್ಕೆ ಈ ಚಿತ್ರದ ಮೂಲಕ ಮೊದಲ ಬಾರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿತು. ಹಾಗೂ ಈ ಚಿತ್ರದ ನಟನೆಗಾಗಿ ರಾಜಕುಮಾರ್ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರು.ಈ ಸಿನಿಮಾ 1954 ರಲ್ಲಿ ತೆರೆಕಂಡಿತ್ತು. ಇದಲ್ಲದೆಯೇ  ರಾಜ್ ನಟನೆಯ ಸಿದ್ದಲಿಂಗಯ್ಯ ನಿರ್ದೇಶನದ 'ಬಂಗಾರದ ಮನುಷ್ಯ'(1972)  ಚಿತ್ರ ಇದು ಮೊದಲ ಬಾರಿಗೆ ಬರೊಬ್ಬರಿ ಒಂದು ವರ್ಷ ಪೂರೈಸಿದ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
   ಕನ್ನಡದಲ್ಲಿ ಕಪ್ಪು ಬಿಳುಪಿನ ಚಿತ್ರಗಳ ನಂತರದಲ್ಲಿ ಮೊದಲಾ ಸಲ ಬಿ.ಎಸ್ ರಂಗ ಅವರ ನಿರ್ದೇಶನದಲ್ಲಿ 1964ರಲ್ಲಿ 'ಅಮರ ಶಿಲ್ಪಿ ಜಕಣಾಚಾರಿ' ಎಂಬ ಇಸ್ಟಮನ್ ಬಣ್ಣದ ಚಿತ್ರ ಬರುವ ಮೂಲಕ ಹೊಸ ಅದ್ಯಾಯ ಪ್ರಾರಂಬಿಸಿದರು. 
   ರಿಮೇಕ್ ಎನ್ನುವುದು ಈ ಸಮಯದಲ್ಲಿ ಇದ್ದುದಲ್ಲ ಇದು 1957ರಲ್ಲಿಯೇ ಎಸ್.ಎಮ.ಎಸ್ ನಾಯ್ಡು ಅವರು ತಮಿಳಿನ ಮಲೇ ಕಳ್ಳನ್ ಎಂಬ ಸಿನಿಮಾವನ್ನು ಕನ್ನಡದಲ್ಲಿ ಬೆಟ್ಟದ ಕಳ್ಳ ಎಂದು ತೆರೆಗೆ ತರುವ ಮೂಲಕ ರಿಮೇಕಿಗೆ  ನಾಂದಿ ಹಾಡಿದರು. 
   ನಮ್ಮ ಕನ್ನಡ ಅನೇಕಾನೇಕ ಸಾಹಿತಿಗಳನ್ನು‌ ಕಂಡಂತಹ ನಾಡು. ಎಂಟು ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಮೆ ನಮ್ಮ ಹೆಮ್ಮೆಯ‌ ಸಾಹಿತಿಗಳಿಗೆ‌‌ ಸಲ್ಲಬೇಕು. ಅಂತಹ ಕಾದಂಬರಿಗಳನ್ನು ಸಿನಿಮಾವಾಗಿ‌ ನಿರ್ಮಿಸಿದಂತಹ ಸಾಧನೆಯನ್ನು ನಿರ್ದೇಶಕ ಗಿರೀಶ್ ಕಾರ್ನಾಡ್ ಮಾಡಿದ್ದಾರೆ. ಅವರು‌ 1973ರಲ್ಲಿ ಆಲನಳ್ಳಿ ಕೃಷ್ಣ ಅವರ ಕಾಡು ಎಂಬ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಚಿತ್ರವಾಗಿ ನಿರ್ಮಿಸಿದ್ದರು.
   1972ರಲ್ಲಿ ತೆರೆಕಂಡ "ನಾಗರಹಾವು" ಚಿತ್ರದಲ್ಲಿ 'ಬಾರೆ ಬಾರೆ ಚಂದದ ಚಲುವಿನ‌ತಾರೆ' ಎಂಬ ಹಾಡು ಭಾರತದಲ್ಲಿಯೇ ಮೊದಲ ಸ್ಲೋ ಮೋಷನ್ ಸಾಂಗ್ ಎಂಬ ಕೀರ್ತಿಗೆ ಭಾಜನವಾಗಿದೆ. ಈ ಸಿನಿಮಾವನ್ನು ಕನ್ನಡದ ಹೆಸರಾಂತ ನಿರ್ದೇಶಕ ಪುಟ್ಟಣ್ಣಕಣಗಾಲ್ ನಿರ್ದೇಶಿಸಿದ್ದರು.
    ಕನ್ನಡ ಚಿತ್ರರಂಗದ ಮತ್ತೊಂದು ಮುತ್ತು ಎಂದರೆ ಅದು ಕರಾಟೆಕಿಂಗ್ ಶಂಕರ್ ನಾಗ್ ಅವರಿಗೆ ಸಿನಿಮಾದ ಮೇಲೆ‌ ಇದ್ದ  ಪ್ಯಾಶನ್ ಇಂದಿನ ಅನೇಕರಿಗೆ ಮಾದರಿ ಎನ್ನಬಹುದು. ಅವರು ನಿರ್ದೇಶಿಸಿದ್ದ " ಒಂದು ಮುತ್ತಿನ ಕಥೆ" ಸಿನಿಮಾದಲ್ಲಿ ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಅಂಡರ್ ವಾಟರ್ ದೃಶ್ಯವನ್ನು ಸೆರೆಹಿಡಿದು ಭಾರತ ಚಿತ್ರರಂಗವೇ ಕನ್ನಡದತ್ತ ತಿರುಗಿ‌ ನೋಡುವಂತೆ ಮಾಡಿದ್ದರು.
    ಸಿನಿಮಾರಂಗ ಎಂದರೆ ಮೂಗು ಮುರಿಯುತ್ತಿದ್ದ ಕಾಲದಲ್ಲಿ‌  ಪ್ರೇಮ ಕಾತಂತ್ ' ಪಣಿಯಮ್ಮ' (1983) ಎಂಬ ಚಿತ್ರ ನಿರ್ದೇಶಿಸುವುದರ ಮೂಲಕ ಕನ್ನಡದ ಮೊದಲ ಮಹಿಳಾ ನಿರ್ದೇಶಕಿಯಾಗಿ ಹೊರಹೊಮ್ಮಿದರು. 
    ಸೌಮ್ಯ, ಪೌರಾಣಿಕ ಚಿತ್ರಗಳ ಸಮಯದಲ್ಲಿ ಹೊಸ ಅಲೆಯ ಸಿನಿಮಾವನ್ನು ಪರಿಚಯಿಸಿದ ಹೆಗ್ಗಳಿಕೆ ಉಪೇಂದ್ರ ಅವರಿಗೆ ಸಲ್ಲುತ್ತದೆ. ಹೌದು ಚಂದನವನಕ್ಕೆ  ರೌಡಿಸಂ ಮಾದರಿ ಸಿನಿಮಾವನ್ನು "ಓಂ"(1995) ಮೂಲಕ ಪರಿಚಯಿಸಿ ಎಲ್ಲರ ಹುಬ್ಬೆರುವಂತೆ ಮಾಡಿದ್ದರು. ಚಿತ್ರದ ಕ್ರೆಜ್ ಎಷ್ಟಿತ್ತೆಂದರೆ ಸುಮಾರು 450ಕ್ಕೂ ಹೆಚ್ವು ಬಾರಿ ರೀ ರೀಲಿಸ್ ಆಗಿದೆ ಮತ್ತು ಇದರಲ್ಲಿ ಕೆಲವು ನೈಜ ರೌಡಿಗಳನ್ನು ಕರೆತರಲಾಗಿತ್ತು. ಈ ಸಿನಿಮಾದಿಂದ ಶಿವರಾಜ ಕುಮಾರ್ ಅವರ ಹೆಸರೆ ಬೆರೆಯಾಯಿತು.
    ಯಾರೂ ಊಹಿಸಿರದ ರೀತಿಯಲ್ಲಿ ಬಂದು ತಂಪನೆಯ ಮಳೆಯನ್ನು ಸುರಿಸಿದ್ದು 'ಮುಂಗಾರುಮಳೆ'(2010) ತಂದವರು ಯೋಗರಾಜ್ ಭಟ್. ಈ ಸಿನಿಮಾ ಅಂದಿಗೆ ಎಲ್ಲರ ಮನದಲ್ಲಿಯೂ ಮುಂಗಾರು ಮಳೆಯನ್ನೇ ತರಿಸಿತ್ತು. ಚಿತ್ರ ಭಾರತದ ಇತಿಹಾಸದಲ್ಲಿ ಒಂದು ವರ್ಷಗಳ ಕಾಲ ಮಲ್ಟಿಪ್ಲೆಕ್ಸ್ ಗಳಲ್ಲಿ ಪೂರೈಸಿದ ಮೊದಲ ಚಿತ್ರವಾಗಿ‌ ತೆರೆಯ ಮೇಲೆ ರಾರಜಿಸಿ. ನಟ ಗಣೇಶ್ ಗೆ ಉತ್ತಮ ಅಡಿಪಾಯ ಹಾಕಲು‌ ಸಹಾಯವಾಯಿತು.
    ಕನ್ನಡ ಸಿನಿ‌ಲೋಕದಲ್ಲಿ 3D ಮೊದಲ ಸಿನಿಮಾ " ಕಠಾರಿವೀರ ಸುರಸುಂದರಾಂಗಿ" ಹಾಗೂ ಮೊದಲ ಪೌರಾಣಿಕ 3D ಸಿನಿಮಾ      " ಕುರುಕ್ಷೇತ್ರ "  ಈ ಎರಡು ಸಿನಿಮಾವನ್ನು ಮುನಿರತ್ನ ಅವರು ನಿರ್ಮಿಸಿದ್ದರು.
    ಸಹಜವಾಗಿ ಯಾರಾದರೂ ಒಬ್ಬ ನಿರ್ಮಾಪಕರು ಹಣ ಹೂಡಿ‌ ಚಿತ್ರ ನಿರ್ಮಿಸುವುದು ವಾಡಿಕೆ. ಆದರೆ ಮೊದಲ ಬಾರಿ‌ ಪವನ್ ಕುಮಾರ್ ಜನರಿಂದ ( ಕ್ರೌಡ್ ಪಂಡಿಂಗ್) ಮೂಲಕ ಒಂದು‌‌ ಚಿತ್ರ ತೆರೆತಂದರು. 2012ರಲ್ಲಿ ' ಲೂಸಿಯಾ' ಈ ತರಹದ ವಿನೂತನ ಚಿತ್ರವಾಗಿತ್ತು. ಈ ಸಿನಿಮಾಗೆ ಸುಮಾರು 1300ಕ್ಕೂಹೆಚ್ಚು ಜನರು 70ಲಕ್ಷ ಹಣ ಹೂಡಿಕೆ ಮಾಡುವುದರ ಮೂಲಕ ಪ್ರೇಕ್ಷಕರೆ ನಿರ್ಮಾಪಕರಾದರು.
    ಚಿತ್ರಂಮದಿರಗಳಲ್ಲಿ ಸಿನಿಮಾ ತೆರೆಕಾಣುವುದು‌ ಪದ್ದತಿ ಆದರೆ ಈಗಿನ ಆಧುನಿಕ ಜಗತ್ತಿನಲ್ಲಿ ಎಲ್ಲವು ಆನ್ ಲೈನ್ ಆಗಿರುವುದರಿಂದ  ಸಿನಿಮಾಗಳು ಸಹ‌  ಆನ್ ಲೈನ್ ಪ್ಲಾಟ್ ಪಾರ್ಮ ತೆರೆಕಾಣುತ್ತಿವೆ. ಆದರೆ ಈ ರೀತಿ ಬಂದಂತಹ ಕನ್ನಡದ ಮೊದಲ ಸಿನಿಮಾ "ಭಿನ್ನ"(2019) ಇದನ್ನು ಆದರ್ಶ್ ಎಚ್ ಈಶ್ವರಪ್ಪ ನಿರ್ದೇಶಿಸಿದ್ದು, ಜೀ ಪಾಯ್ ಪ್ಲಾಟ್ ಫಾರ್ಮ್ ಅಲ್ಲಿ ವೀಕ್ಷಿಸುವಂತೆ ಮಾಡಿತ್ತು.
    ಕನ್ನಡದ ಪತಾಕೆಯನ್ನು ಎಲ್ಲಾ ಭಾಷೆಗಳಲ್ಲಿಯೂ ಹಾರಿಸಿದ ಕೀರ್ತಿ ಅಭಿನಯ ಚಕ್ರವರ್ತಿ ಸುದೀಪ್ ಸಲ್ಲಬೇಕು. ಅವರ ಅಭಿನಯಕ್ಕೆ ಎಲ್ಲರೂ ಮನಸೋಲುತ್ತಾರೆ. ಈ ರೀತಿಯ ಅಭಿನಯಕ್ಕಾಗಿ ಹುಚ್ಚಾ, ನಂದಿ ಹಾಗೂ ಸ್ವಾತಿಮುತ್ತು ಸಿನಿಮಾಗಳಿಗೆ‌ ಮೂರು ಫಿಲ್ಮಪೇರ್ ಪ್ರಶಸ್ತಿಯನ್ನು ಪಡೆಯುವ ಮೂಲಕ ಮೊದಲ ಕನ್ನಡ ನಟನೊಬ್ಬ ಹ್ಯಾಟ್ರಿಕ್ ಫಿಲ್ಮಪೇರ್ ಅವಾರ್ಡ್ ಪಡೆದ ಸಾಧನೆ ಮಾಡಿದ್ದಾರೆ.
    ಇಡಿ ಕನ್ನಡ ಚಿತ್ರದ ದಿಕ್ಕನ್ನೇ ಬದಲಿಸಿದ ಸಿನಿಮಾ ಎಂದರೆ ಅದು ಪ್ರಶಾಂತ್ ನೀಲ್ ನಿರ್ದೇಶನದ " ಕೆ.ಜಿ.ಎಪ್- ಚಾಪ್ಟರ್ ಒನ್" ಇ ಸಿನಿಮಾ ತೆರೆಕಂಡ ನಂತರ ಚಂದನವನದ ಮಾರುಕಟ್ಟೆ ವಿಸ್ತರಿಸಲು ಸಹಾಯಕವಾಯಿತು.  ಕನ್ನಡ ಸಿನಿಮಾ ಇತಿಹಾಸದಲ್ಲಿಯೇ ಮೊದಲಬಾರಿ 100ಕೋಟಿ ಕ್ಲಬ್ ದಾಟಿ ವಿನೂತನ ದಾಖಲೆಯನ್ನು ಮಾಡಿತು. ಹಾಗೂ ಪ್ರಪ್ರಥಮವಾಗಿ ಐದು ಭಾಷೆಗಳಲ್ಲಿ ಏಕ ಕಾಲಕ್ಕೆ ತೆರೆಕಾಣುವ‌ ಮೂಲಕ ಪ್ಯಾನ್ ಇಂಡಿಯಾ ಸಂಸ್ಕ್ರತಿಯನ್ನು ಕನ್ನಡಕ್ಕೆ ಕರೆತರಲು‌ ಕಾರಣವಾಯಿತು.ಇನ್ನು ಇದರ ಎರಡನೆ ಭಾಗಕ್ಕಾಗಿ ಇಡಿ ಭಾರತವೆ ಕಾತೂರದಿಂದ ಸ್ಯಾಂಡಲ್ವುಡ್ ಕಡೆ ತಿರುಗಿ‌ ಕಾಯುತ್ತಿದೆ.
    ಈ ತೆರೆನಾದ ಅನೇಕ ಮೊದಲುಗಳಿಗೆ ಕನ್ನಡ ಸಿನಿಮಾದ ಕೆಲ ಸಿನಿಮಾಗಳು ಕಾರಣವಾಗಿದೆ. ಇನ್ನು ಅನೇಕ ಪ್ರಾರಂಭಗಳನ್ನು ನೀಡಿದ ಚಿತ್ರಗಳು ನಮ್ಮಲ್ಲಿವೆ. ಅದರಲ್ಲಿ ಕೆಲವನ್ನು ಮಾತ್ರ ಹೆಳಲಾಗಿದ್ದು ಕಾಣದ ಅದೇಷ್ಟೋ ಚಿತ್ರಗಳನ್ನು‌ ನಾವು‌ ನೋಡಿ ಮೆಚ್ಚಿ ಹೊಗಳಿದ್ದೆವೆ.

Comments

Popular posts from this blog

ನೆನಪುಗಳ ಬುಟ್ಟಿ ತೆರೆದಾಗ

ಸ್ವಾರಿ..ಹೇಳಿ ಉಳಿದ ಮಾತು

ಮನದ ಭಾಷ್ಯವಿದು....