Posts

ಸ್ವಾರಿ..ಹೇಳಿ ಉಳಿದ ಮಾತು

   ಕೆಲವೊಮ್ಮೆ ಎಲ್ಲವೂ ಕ್ಷಣಿಕ ಅನಿಸುತ್ತೆ. ಅದಕ್ಕೆ ಇರಬೇಕು ಜೀವನಕ್ಕೂ ದೇವರು ಒಂದು ಅಂತಿಮ ನಿಲ್ದಾಣವನ್ನು ಇಟ್ಟಿರುವುದು. ಆದರೆ ಆ‌ ನಿಲ್ದಾಣ ತಲುಪುವ ಒಳಗಾಗಿ  ಅದೆಷ್ಟೋ ವ್ಯಕ್ತಿಗಳೂ ನಮ್ಮ ಜೀವನದಲ್ಲಿ ಬಂದು ಅವರವರ ನಿಲ್ದಾಣ ಬಂದಾಗ ಇಳಿದು‌‌ ಹೋಗಿರುತ್ತಾರೆ. ಅಂತವರಲ್ಲಿ ಕೆಲವರು ಮಾತ್ರ ನೆನಪಿನಲ್ಲಿ, ಮನಸ್ಸಿನಲ್ಲಿ ಉಳಿದು ಬಿಡುತ್ತಾರೆ. ಆ ರೀತಿ ನನ್ನ ಜೀವನದ ಪಯಣದ ವೇಳೆಯೂ ಸಿಕ್ಕವಳು ನೀನು. ಆದರೆ ಇದೀಗ ಕೇವಲ ನೆನಪುಗಳನ್ನು ಮಾತ್ರ ಬಿಟ್ಟು ಹೊರಟು ಹೋಗಿದ್ದಿಯಾ. ಕೆಲವೊಂದಿಷ್ಟು ಮಾತಗಳನ್ನು ಆಡಬೇಕಿತ್ತು‌ನಿನ್ನ ಜೊತೆ ಅದಕ್ಕೆ ಇದನ್ನ ಬರೆದಿರುವೆ. ಪ್ರೀ ಆದಾಗ ಓದ ಮನಸ್ಸಾದರೆ ಮಾತ್ರ ಮುಂದೆ ಒಮ್ಮೆ ಓದು. ನಿಂಗೆ ನೆನಪಿದ್ದ ಅವಾಗ ಮೊಸ್ಟ್ಲಿ ಇನ್ನು ಪಿಯು ಕಾಲೇಜು ಇಬ್ರಿಗು ಯಾರು ಹೇಳದು ಗೊತ್ತಿತ್ತಿಲ್ಲೆ. ಬಟ್ ಸ್ವಲ್ಪ ದಿನಾ ಅದ್ಮೇಲೆ ಗೊತ್ತಾತು. ಬಟ್ ಇಬ್ರು ಫ್ರೆಂಡ್ ಆಗಿದ್ದು ಮಾತ್ರ ಡಿಗ್ರಿಗೆ ಹೊದ್ಮೆಲೆ. ಅಲ್ಲಿಂದ ಇಬ್ರ ಫ್ರೆಂಡ್ ಶಿಪ್ ರಾಶಿ ಚೋಲೊ ಬಿಲ್ಡ್ ಅತು. ಬಟ್ ಅವಾಗ ಅವಾಗ ಕಚ್ಕತ್ತಾ,‌ ಜಗಳ ಆಡ್ತಾ ಇದ್ದು ಅಗಿರ್ತಿತ್ತು. ಆದ್ರು ಮತ್ತೆ ಸರಿ ಅಗ್ತಿದ್ದ. ಆದ್ರೆ ಎಂತಕ್ಕೆ ಈ ಸಲ ಜಗಳ ಆಗೋದ್ರು ಸುಮಾರು ತಿಂಗಳ ಅತು ಮಾತು ಕಥೆ ಏನಿಲ್ದೆ. ಇರಲಿ ನಂಗೆ ಅರ್ಥಾಗ್ತು ನಿಂಗೆ ಈಗ ನನಗಿಂತ ಮೇನ್ ಅಗಿ ಒಂದು ಫ್ಯಾಮಿಲಿ ಹೇಳಿ ಅಜು. ಅದಕ್ಕೆ ಹೆಚ್ಚು ಇಂಪಾರ್ಟೆಂಟಿಸಿ ಕೊಡವ್ ಹೇಳದು. ಓಕೆ ಐ ನೋ. ಆದ್ರೆ ...

ಮನದ ಭಾಷ್ಯವಿದು....

  ಕೆಲವೊಂದು ವಿಚಾರಗಳು ಮನಸ್ಸಿಗೆ ಎಷ್ಟು ಇಷ್ಟವಾಗುತ್ತದೆ ಎಂದರೆ, ಅವುಗಳನ್ನು ಹಾಗೇ ಸುಮ್ಮನೆ ಮರೆಯಲು ಸಾಧ್ಯವಾಗುವುದಿಲ್ಲ. ಹಾಗೇಯೆ ಕೆಲವೊಂದು ವ್ಯಕ್ತಿಗಳು ಸಹ ತುಂಬಾ ಇಷ್ಟವಾದಾಗ ಅವರನ್ನೂ ಮರೆಯಲು ಆಗುವುದಿಲ್ಲ. ಹೌದು ಅವಳು ಸಹ ಎಲ್ಲಿಂದಲೋ ನನ್ನ ಜೀವನಕ್ಕೆ ಬಂದವಳು. ಆದರೆ ಸ್ಮೇಹವೆಂಬ ಬೆಸುಗೆ ಇಬ್ಬರನ್ನು ಇಂದಿಗೆ ತುಂಬಾ ಸನಿಹಕ್ಕೆ ತಂದು‌ ನಿಲ್ಲಿಸಿದೆ. ಎಷ್ಟರಮಟ್ಟಿಗೆ ಎಂದರೆ ನಾನು ಅವಳ‌‌ ಹೆಸರನ್ನು ಸರಿಯಾಗಿ ಕರೆಯದೇ ತುಂಬಾ ವರ್ಷಗಳೇ ಅಗಿರಬಹುದು. ಹೆಸರ ಬದಲಾಗಿ ನಾನು ಅವಳನ್ನು ಪೆದ್ದು ಎಂದೇ ಕರೆಯುತ್ತಿರುವೆ.     ನಿಜ ಹೇಳಬೇಕೆಂದರೆ ನನಗೆ ನನ್ನ ಊರೆ ಒಂದು ರೀತಿಯಲ್ಲಿ ಹೊಸದು. ನಾನು ಕಲಿತಿದೆಲ್ಲಾ ಹೆಚ್ಚಾಗಿ ಮನೆಯಿಂದ ಹೊರಗೆ ಇದ್ದು. ಹಾಗಿದ್ದರೂ ಕಾಲೇಜು ಜೀವನ ಮಾತ್ರ ನನ್ನ ಊರಿನಲ್ಲೇ ಮುಗಿಸಿದ್ದೆನೆ. ಆ ವೇಳೆ ಪರಿಚಯವಾದವಳು ಈ ಪೆದ್ದು. ಅವಳು ನನ್ನ ಊರಿನವಳೆ, ಆದರೆ ನಾನು ಊರಿಗೆ ಹೊಸಬನಾಗಿದ್ದರಿಂದ ನನಗೆ ಅವರ್ಯಾರ ಪರಿಚಯವೂ ಇರಲಿಲ್ಲ. ಪಿಯುಸಿ ಸಮಯದಲ್ಲಿ ಅವಳ ಹೆಸರಷ್ಟೆ ತಿಳಿದಿತ್ತು ಬಟ್ ಎಲ್ಲೋ ಅಗೊಮ್ಮೆ ಇಗೊಮ್ಮೆ ಜಸ್ಟ್ ಹಾಯ್ ,ಬಾಯ್ ಅಷ್ಟೆ. ಆದರೆ ಡಿಗ್ರಿ ಪ್ರಾರಂಭವಾಗಿ ಕೆಲ ಸಮಯ ಕಳೆಯುವುದರಷ್ಟರಲ್ಲಿ ಮಾತನಾಡುವಷ್ಟು ಪರಿಚಯವಾಗಿತ್ತು. ಅಮೇಲೆ ಅದೊಂದು ಸುಂದರ ಸ್ನೇಹವಾಗಿ ತಿರುಗಿತು. ಈಗಲೂ ಇಬ್ವರು ಆಗಾಗ ಕಾಮನ್ ಆಗಿ ಉತ್ತರ ಸಿಗದ ಪ್ರಶ್ಬೆಯೊಂದನ್ನು ಕೇಳುತ್ತಿರುತ್ತೇವೆ. ಅದೆನೇಂದರೆ " ಅ...

ನೆನಪುಗಳ ಬುಟ್ಟಿ ತೆರೆದಾಗ

 ತುಂಬಾ ದಿನಗಳಾಗಿತ್ತು ಬರವಣಿಗೆ ಎನ್ನುವುದಕ್ಕೆ ಕೈ ಹೊರಳದೆಯೆ. ಏಕೋ ಗೊತ್ತಿಲ್ಲ ಬರಯಬೇಕು ಎನ್ನುವ ಕಿಂಚಿತ್ತು ಮನಸ್ಸು ಮೂಡಲಿಲ್ಲ. ಕೆಲವೊಂದು ನನ್ನೊಳಗಿನ ತೊಳಲಾಟಗಳೋ ಅಥವಾ ಯಾವ ವಿಷಯವೂ ಸಿಗಲಿಲ್ಲವೋ ನಾನರಿಯೆ ಒಟ್ಟಿನಲ್ಲಿ  ಬೆರಳುಗಳು ಕೇವಲ ಮೊಬೈಲ್ ಕೀ ಬೋರ್ಡ್ ಗಳನಷ್ಟೇ ಕುಟ್ಟುತ್ತಿದ್ದವು. ಇಷ್ಟು ವರುಷಗಳ‌ ಕಾಲ ಜೊತೆಗಾರನಂತಿದ್ದ ಬರಹದ ಮೂಲವಾದ ಲೇಖನಿಯು ಅದ್ಯಾವುದೋ ಮೂಲೆಯಲ್ಲಿ ತನ್ನ ಅಸ್ಥಿತ್ವವೇ ಮುಗಿದಂತೆ ಸದ್ದಿಲ್ಲದೆ ಮಲಗಿತ್ತು. ಎಷ್ಟು ದಿನ ಅಂತಾ ಮೂಲವನ್ನು ಮರೆತು ಬದುಕುವುದು ಮತ್ತೆ ನೆನಪಾದ ಲೇಖನಿಯನ್ನು ಕೈಗೆತ್ತಿಕೊಂಡು ಬರಯಲಾರಂಭಿಸಿದೆ ಆದರೆ ಏನು ಬರೆಯುವುದು ಎನ್ನುವುದೇ ಹೊಳಯದಾಗ‌ ನೆನಪಾದ್ದು ಕೆಲವೊಂದು ಸಂಗತಿಗಳು ನನ್ನ ಭಾಷೆಯಲ್ಲಿ ಬರೆದರೆ ಸೂಕ್ತ  ಎನಿಸಿತು ಎಂದು ಮುಂದೆ ಬರುವ ಕೆಲ ವಿಷಯಗಳನ್ನು ಬರೆದಿರುವೆ ಕೆಲವೊಂದು ವಿಚಾರಗಳನ್ನು ನಾನು ನೋಡಿದ ಹಾಗೇ ಇದೊಂದು ಪೀಠಿಕೆ ಎನ್ನಬಹುದು ಅಷ್ಟೆ ಮುಂದಿನ ಸಾಲುಗಳಿಗೆ.    ಕೆಲವೊಂದು ವಿಷಯಗಳೇ ಹಾಗೆ ಕೆಲವೇ ದಿನಗಳಲ್ಲಿ ಮನದ ಆಳಕ್ಕೆ ಇಳಿಯುತ್ತವೆ ಹಾಗೇ ಅಳಿದು‌ ಹೊಗುತ್ತದೆ. ಆದರೆ ಇನ್ನೂ ಕೆಲವೊಂದು ನಮ್ಮದು ಎಂಬ ವಿಷಯ ಮನಸ್ಸಿಗೆ ಬರುವುದಕ್ಕೆ ತಡವಾದರೂ ಅಲ್ಲಿ ಬಹುದಿನಗಳವರೆಗೆ ಉಳಿದು ಹೋಗುತ್ತದೆ. ಹಲವಾರು ದಿನಗಳಿಂದ ಹುಡುಕುತ್ತಿದ ನನ್ನ ದಾರಿಯು ಕಂಡದ್ದು ಪ್ರಪಂಚದ ಎಲ್ಲಾ  ಹಾದಿಗಳು ನಿರ್ಜನವಾದಾಗ ಅಂದರೆ ಬಯಲು ಸೀಮ...

ಸ್ಯಾಂಡ್ ವುಡ್ ದಾಖಲೆಗಳಿಗೆ ಭಾಷ್ಯವಿದು

  ಯಾವುದೇ ಒಂದು ಕ್ಷೇತ್ರಕ್ಕೂ ಆರಂಭ ಎನ್ನುವುದು‌ ಅತ್ಯಂತ ಮುಖ್ಯಮಾಗಿರುತ್ತದೆ. ಅಂತೆಯೇ ಅನೇಕ ಮೊದಲುಗಳಿಗೂ ಅವುಗಳು ಸಾಕ್ಷಿಯಾಗಿರುತ್ತದೆ. ಹಾಗೇ ಕನ್ನಡ ಸಿನಿಮಾ ರಂಗದಲ್ಲಿ ಅದೆಷ್ಟೋ ಸಿಮಾಗಳು ನಮ್ಮೆದುರು ಬಂದು ಹೋಗಿವೆ ಕೆಲವೊಂದು ಇನ್ನು ಮನದಲ್ಲಿ ಹಾಗೆ ಅಚ್ಚಳಿಯದಂತೆಯೆ ಉಳಿದಿವೆ. ಅವುಗಳಲ್ಲಿ ಕೆಲ ಸಿನಿಮಾಗಳು ಚಂದನವನಕ್ಕೆ ಹೊಸ ಆರಂಭವನ್ನು, ಹೊಸ ಭಾಷ್ಯವನ್ನು, ದಾಖಲೆಗಳನ್ನು ಮಾಡಿವೆ.ಅಂತಹ ಕೆಲವೊಂದು ವಿನೂತನ‌ ದಾಖಲೆಗಳನ್ನು, ಪ್ರಾರಂಭವನ್ನು ಮಾಡಿದಂತಹ ಚಿತ್ರಗಳು ಜನಮನದಲ್ಲಿ ಉಳಿದಿವೆ ಅಂತಹ ಕೆಲ‌ ಸಿನಿಮಾಗಳನ್ನು ನೀವು ಯಾವುದೆಂದು ನೋಡಿ.    ಹೌದು ಎಲ್ಲದಕ್ಕೂ ಒಂದು ಪ್ರಾರಂಭ ಎನ್ನುವುದಿರುತ್ತದೆ ಹಾಗೇ ಸ್ಯಾಂಡಲ್ ವುಡ್  ನಲ್ಲಿ‌ ಮೊದಲು ತೆರೆಕಂಡ ಸಿನಿಮಾವೆಂದರೆ ಅದು 'ಮೃಚ್ಛಕಟಿಕ' ಇದು ಒಂದು ಮೂಕಿ ಚಿತ್ರವಾಗಿದ್ದು 1931ರಲ್ಲಿ ತೆರೆಕಂಡಿತ್ತು. ಆದರೆ ಮೊದಲ ಟಾಕಿ ಚಿತ್ರ ಎಂದರೆ ವೈ.ವಿ ರಾವ್ ನಿರ್ದೇಶನದ  'ಸತಿ ಸುಲೋಚನ' ಇದು 1934ರಲ್ಲಿ ತೆರೆಕಂಡಿದ್ದು ಇದರಲ್ಲಿ ಸುಬ್ಬಯ್ಯ ನಾಯ್ಡು ನಾಯಕನಾಗಿ ಅಭಿನಯಿಸಿದ್ದರು. ಆದರೆ ಈ ಚಿತ್ರದಿಂದ ಕನ್ನಡ ಸಿನಿರಂಗ ಪ್ರಾರಂಭವೆಂದು ಹೇಳುವುದು ಉಂಟು.     ಇ‌ನ್ನು   ಕನ್ನಡದ ಹೆಮ್ಮೆ ನಮ್ಮ ವರನಟ ರಾಜಕುಮಾರ್ ಕನ್ನಡ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದ ಮೊದಲ ಚಿತ್ರ 'ಬೇಡರಕಣ್ಣಪ್ಪ'. ಕನ್ನಡ ಸಿನಿಮಾ ಒಂದಕ್ಕೆ ಈ ಚಿತ್ರದ ಮೂಲಕ...

ಕಲಿಕೆ ಬದಲಾವಣೆಗೆ ಪ್ರಾರಂಭ

ನಾವು ಎಷ್ಟು ವಿಷಯಗಳನ್ನು ತಿಳಿದುಕೊಂಡಿದ್ದೆವೆ  ಎಂಬುದಕ್ಕಿಂತ ತಿಳಿದ ವಿಷಯವನ್ನು  ಜೀವನದಲ್ಲಿ ಎಷ್ಟು ಅಳವಡಿಸಿಕೊಂಡಿದ್ದೆವೆ  ಎನ್ನುವುದು ಮುಖ್ಯವಾಗುತ್ತದೆ ಏಕೆಂದರೆ ತಿಳಿದಕೊಂಡ ವಿಷಯಗಳು ಜೀವನಕ್ಕೆ ಹೊಸದೊಂದು ಪಾಠವನ್ನು ಕಲಿಸಿತ್ತದೆ ಹಾಗೇ ಅದು ನಮ್ಮನ್ನು ಬದಲಿಸುತ್ತದೆ ಬದಲಾಗಿ ಏಕೆಂದರೆ ಅದು ಒಂದು ಜೀವನದ ಪಾಠವೆ.                                                                                                                          ಅನಾಮಿಕ ನುಡಿ.