ಮನದ ಭಾಷ್ಯವಿದು....
ಕೆಲವೊಂದು ವಿಚಾರಗಳು ಮನಸ್ಸಿಗೆ ಎಷ್ಟು ಇಷ್ಟವಾಗುತ್ತದೆ ಎಂದರೆ, ಅವುಗಳನ್ನು ಹಾಗೇ ಸುಮ್ಮನೆ
ಮರೆಯಲು ಸಾಧ್ಯವಾಗುವುದಿಲ್ಲ. ಹಾಗೇಯೆ ಕೆಲವೊಂದು ವ್ಯಕ್ತಿಗಳು ಸಹ ತುಂಬಾ ಇಷ್ಟವಾದಾಗ ಅವರನ್ನೂ
ಮರೆಯಲು ಆಗುವುದಿಲ್ಲ. ಹೌದು ಅವಳು ಸಹ ಎಲ್ಲಿಂದಲೋ ನನ್ನ ಜೀವನಕ್ಕೆ ಬಂದವಳು. ಆದರೆ ಸ್ಮೇಹವೆಂಬ
ಬೆಸುಗೆ ಇಬ್ಬರನ್ನು ಇಂದಿಗೆ ತುಂಬಾ ಸನಿಹಕ್ಕೆ ತಂದು ನಿಲ್ಲಿಸಿದೆ. ಎಷ್ಟರಮಟ್ಟಿಗೆ ಎಂದರೆ ನಾನು
ಅವಳ ಹೆಸರನ್ನು ಸರಿಯಾಗಿ ಕರೆಯದೇ ತುಂಬಾ ವರ್ಷಗಳೇ ಅಗಿರಬಹುದು. ಹೆಸರ ಬದಲಾಗಿ ನಾನು ಅವಳನ್ನು
ಪೆದ್ದು ಎಂದೇ ಕರೆಯುತ್ತಿರುವೆ.
ನಿಜ ಹೇಳಬೇಕೆಂದರೆ ನನಗೆ ನನ್ನ ಊರೆ ಒಂದು ರೀತಿಯಲ್ಲಿ ಹೊಸದು.
ನಾನು ಕಲಿತಿದೆಲ್ಲಾ ಹೆಚ್ಚಾಗಿ ಮನೆಯಿಂದ ಹೊರಗೆ ಇದ್ದು. ಹಾಗಿದ್ದರೂ ಕಾಲೇಜು ಜೀವನ ಮಾತ್ರ ನನ್ನ
ಊರಿನಲ್ಲೇ ಮುಗಿಸಿದ್ದೆನೆ. ಆ ವೇಳೆ ಪರಿಚಯವಾದವಳು ಈ ಪೆದ್ದು. ಅವಳು ನನ್ನ ಊರಿನವಳೆ, ಆದರೆ ನಾನು
ಊರಿಗೆ ಹೊಸಬನಾಗಿದ್ದರಿಂದ ನನಗೆ ಅವರ್ಯಾರ ಪರಿಚಯವೂ ಇರಲಿಲ್ಲ. ಪಿಯುಸಿ ಸಮಯದಲ್ಲಿ ಅವಳ ಹೆಸರಷ್ಟೆ
ತಿಳಿದಿತ್ತು ಬಟ್ ಎಲ್ಲೋ ಅಗೊಮ್ಮೆ ಇಗೊಮ್ಮೆ ಜಸ್ಟ್ ಹಾಯ್ ,ಬಾಯ್ ಅಷ್ಟೆ. ಆದರೆ ಡಿಗ್ರಿ
ಪ್ರಾರಂಭವಾಗಿ ಕೆಲ ಸಮಯ ಕಳೆಯುವುದರಷ್ಟರಲ್ಲಿ ಮಾತನಾಡುವಷ್ಟು ಪರಿಚಯವಾಗಿತ್ತು. ಅಮೇಲೆ ಅದೊಂದು
ಸುಂದರ ಸ್ನೇಹವಾಗಿ ತಿರುಗಿತು. ಈಗಲೂ ಇಬ್ವರು ಆಗಾಗ ಕಾಮನ್ ಆಗಿ ಉತ್ತರ ಸಿಗದ ಪ್ರಶ್ಬೆಯೊಂದನ್ನು
ಕೇಳುತ್ತಿರುತ್ತೇವೆ. ಅದೆನೇಂದರೆ " ಅಲಾ ನಂಗ ಇಬ್ರು ಇಷ್ಟು ಕ್ಲೋಸ್ ಪ್ರೇಂಡ್ ಹೇಂಗೆ ಆದ್ವನ
ಅಲಾ" ಬಟ್ ಇಬ್ಬರಿಗೂ ಇನ್ನು ಇದರ ಉತ್ತರ ಮಾತ್ರ ಸಿಗಲಿಲ್ಲ.
ಇವಾಗ ಸ್ವಲ್ಪ ಈ ಪೆದ್ದುನಾ ಪರಿಚಯ
ಮಾಡೋಣ. ಅವಳೆನ್ ತುಂಬಾ ಮಾತನಾಡುವ ಹುಡುಗಿಯಲ್ಲ. ಆದರೆ ಅದೇಕೋ ನನ್ನ ಹತ್ತಿರ ಮಾತ್ರ ಚನ್ನಾಗೆ
ಮಾತಾಡ್ತಾಳೆ. ಇನ್ನು ಗೋಧಿ ಬಣ್ಣ ಅಸಾಧಾರಣ ಮೈಕಟ್ಟು ಅಂದ್ರೆ ತುಂಬಾ ಬಡಿಕೆ ಇದ್ದಾಳೆ. ನನಗೆ
ಅವಳಗಿಂತ ಅವಳ ಜುಟ್ಟು ಇಷ್ಟ ಆಗೋದು. ಯಾವಾಗ್ಲು ಹೇಳ್ತಾ ಇರ್ತಿನಿ ಈ ಜುಟ್ಟು ಮಾತ್ರಾ ಕಟ್ಟು
ಮಾಡೋಕೆ ಹೋಗ್ಬೆಡಾ ಅಂತಾ. ಇನ್ನು ತುಂಬಾ ಏನ್ ಪಾಪಾ ಅಲ್ಲಾ. ಆದ್ರೂ ಒಂಥರಾ ಪಾಪದ್ ಕೂಸು. ಸಿಟ್ಟು
ಯಾವಾಗ್ಲೂ ಮುಗಿನ್ ತುದಿಗೆ ಇರೋದು ಮತ್ತೆ, ಆದ್ರು ಮಾತಲ್ಲಿ, ನಡವಳಿಕೆಯಲ್ಲಿ ಒಂಥರಾ ಒಳ್ಳೆ
ಹುಡಗಿ. ಕೆಲವೊಮ್ಮೆ ತುಂಬಾ ಕೇರ್ ತಗೋಳೊದು ನೊಡಿದ್ರೆ ಇವಳೆನಾ ನನ್ನ ಪ್ರೇಂಡ್ ಅಂತಾ ಅನ್ಸುತ್ತೆ.
ಓವರಾಲ್ ಆಗಿ ಹೇಳ್ಬೆಕಂದ್ರೆ ನನ್ನ ಲೈಪ್ ಅಲ್ಲಿ ಸಿಕ್ಕಿದಂತಾ ಪ್ರೇಂಡ್ ಗಳಲ್ಲಿ ಇವಳು ಮಾತ್ರ
ನಂಗೆ ತುಂಬಾ ಸ್ಪೇಷಲ್ ಅಂತಾ ಹೇಳ್ಬಹುದು. ಇನ್ನು ನಮ್ನಿಬ್ಬರ ಸ್ನೇಹದಲ್ಲಿ ಅದೆಷ್ಟೋ ಮರಯಲಾಗದ
ಕ್ಷಣಗಳನ್ನು ಕಳಿದಿದ್ದಿವಿ. ಅದ್ರಲ್ಲೂ ಕಾಲೇಜಿಂದಾ ಮನೆಗೆ ಹೋಗುವಾಗಾ ಊರಿನ ಲಾಸ್ಟ್ ಬಸ್ ಅಲ್ಲಿ
ಹೋಗಿದ್ದು, ಅವಳು ಬರದು ಕೊಟ್ಟಿದ್ದು ನೋಡ್ಸ್, ಎಕ್ಸಾಂ ಅಲ್ಲಿ ನನ್ನ ಮುಂದೆ ಕುತ್ಗೋಳೊಳು, ಅವಾಗಾ
ಮಾಡಿದ್ದು ಹೆಲ್ಪ ಓ ಸಾಕು ಹೇಳ್ತಾ ಹೋದ್ರೆ ತುಂಬಾ ಇದೆ. ಆದ್ರು ನಂಗೆ ಅವಳಲ್ಲಿ ಇಷ್ಟಾ ಆಗದ್ದು
ಅಂದ್ರೆ ಅದು ನನ್ನ ಜೊತೆ ತುಂಬಾ ಜಗಳಾ ಆಡೋದು. ಆದ್ರು ಆ ಜಗಳಾ ಒಂದೆರಡು ದಿನಾ ಅಷ್ಟೆ. ಆಮೇಲೆ
ಮತ್ತೆ ಅದೆ ಪೆದ್ದು ಎನ್ನೋ ಮಾತುಗಳು ಶುರವಾಗತ್ತೆ. ನಿಜಾ ಅಂದ್ರೆ ಒಬ್ಬ ಹುಡುಗನ ಜೀವನದಲ್ಲಿ
ಒಂದು ಒಳ್ಳೆ ಪ್ರೇಂಡ್ ಹುಡುಗಿ ಆಗಿದ್ರೆ ಆವ್ನು ಅವಳನ್ನಾ ತನ್ನ ಲೈಫ್ ಅಲ್ಲಿ ಎಂದೂ ಮರಿಯೊಲ್ಲ.
ಯಾಕಂದ್ರೆ ಅವಳು ಇವನ್ನಾ ಅದೆಷ್ಟೋ ಒಳ್ಳೆದನ್ನಾ ಕಲ್ಸಿರ್ತಾಳೆ, ಧೈರ್ಯ ತುಂಬಿರ್ತಾಳೆ,
ಬೇಜಾರಾದಾಗ ಸಮಾದಾನ ಮಾಡಿರ್ತಾಳೆ. ಹೀಗಾಗಿ ಹುಡುಗರಿಗೆ ಒಂದು ಒಳ್ಳೆ ಪ್ರೇಂಡ್ ಹುಡ್ಗಿನೂ
ಅಗಿರ್ಬೇಕು. ನಂಗೆ ಪೆದ್ದು ಸಹಾ ಅಷ್ಟೆ ಒಳ್ಳೆ ಸ್ನೇಹಿತೆ. ಅವಳು ನನಗೆ ತುಂಬಾ ಇಷ್ಟಾ ಆಗ್ವಂತಾ
ಪ್ರೇಂಡ್. ಅವಳ ಬಗ್ಗೆ ಎಷ್ಟು ಹೇಳಿದ್ರು ಅದು ಕಮ್ಮಿನೆ. ಸುಮಾರು ಇಲ್ಲೆಗೆ ನಾವಿಬ್ರು ಪ್ರೇಂಡ್
ಆಗಿ ಸುಮಾರು ಏಳು ವಸಂತ ಆಯ್ತು. ಇಷ್ಡು ವರ್ಷದಲ್ಲಿ ನನ್ನಿಂದಾ ನಿಂಗೆ ಎಷ್ಟೋ ಸಲಾ ಬೇಜಾರು
ಮಾಡಿರುವೆ ಅದಕ್ಕೆಲ್ಲಾ ಜಸ್ಟ ಒಂದು ಸ್ವಾರಿ. ಸಾಕು ಮೊದಲೇ ಹೇಳಿದ ಹಾಗೇ ಹೇಳು ಅದೆಷ್ಟೋ ವಿಷಯ
ಇದ್ರೂ, ಬರವಣಿಗೆಯಲ್ಲಿ ಎಲ್ಲದನ್ನು ಹೇಳಲಾಗದು. ಇದು ನನ್ನ ಜೀವನದಲ್ಲಿ ಸಿಕ್ಕಂತಹ ಒಂದು ಅದ್ಬುತ
ಸ್ನೇಹಿತೆಯ ಬಗ್ಗೆ ಮನಸಾರೆ ಬರೆದಂತಾ ಅಕ್ಷರದ ರೂಪವಷ್ಟೆ. ಈ ಬರವಣಿಗೆಯ ಪ್ರತಿಯೊಂದು ಅಕ್ಷರಸಹ
ಅವಳಿಗೆ ಅರ್ಪಣೆ. ಏಕಂದ್ರೆ ಇವತ್ತಿಂದಾ ಇನ್ನು ಒಂದು ವಾರಕ್ಕೆ ಅವಳ ಬರ್ತಡೇ. ಅದಕ್ಕಾಗಿ ನನ್ನ
ಕಡೆಯಿಂದ ನನ್ನ ಗೆಳತಿಗೆ ಮನಸ್ಪೂರಕವಾಗಿ ಬರೆದಂತಹ ಈ ನೆನಪುಗಳು ನನ್ನಿಂದ ಅವಳಿಗೆ ಬರ್ತಡೇ
ಗಿಪ್ಟ ಅಗಿ ನೀಡುತ್ತಿರುವೆ. ಅಡ್ವಾನ್ಸ್ ವಿಶ್ ಯು ಹ್ಯಾಪಿ ಬರ್ತಡೆ ಪೆದ್ದು..
Comments
Post a Comment