ಸ್ವಾರಿ..ಹೇಳಿ ಉಳಿದ ಮಾತು

   ಕೆಲವೊಮ್ಮೆ ಎಲ್ಲವೂ ಕ್ಷಣಿಕ ಅನಿಸುತ್ತೆ. ಅದಕ್ಕೆ ಇರಬೇಕು ಜೀವನಕ್ಕೂ ದೇವರು ಒಂದು ಅಂತಿಮ ನಿಲ್ದಾಣವನ್ನು ಇಟ್ಟಿರುವುದು. ಆದರೆ ಆ‌ ನಿಲ್ದಾಣ ತಲುಪುವ ಒಳಗಾಗಿ  ಅದೆಷ್ಟೋ ವ್ಯಕ್ತಿಗಳೂ ನಮ್ಮ ಜೀವನದಲ್ಲಿ ಬಂದು ಅವರವರ ನಿಲ್ದಾಣ ಬಂದಾಗ ಇಳಿದು‌‌ ಹೋಗಿರುತ್ತಾರೆ. ಅಂತವರಲ್ಲಿ ಕೆಲವರು ಮಾತ್ರ ನೆನಪಿನಲ್ಲಿ, ಮನಸ್ಸಿನಲ್ಲಿ ಉಳಿದು ಬಿಡುತ್ತಾರೆ. ಆ ರೀತಿ ನನ್ನ ಜೀವನದ ಪಯಣದ ವೇಳೆಯೂ ಸಿಕ್ಕವಳು ನೀನು. ಆದರೆ ಇದೀಗ ಕೇವಲ ನೆನಪುಗಳನ್ನು ಮಾತ್ರ ಬಿಟ್ಟು ಹೊರಟು ಹೋಗಿದ್ದಿಯಾ. ಕೆಲವೊಂದಿಷ್ಟು ಮಾತಗಳನ್ನು ಆಡಬೇಕಿತ್ತು‌ನಿನ್ನ ಜೊತೆ ಅದಕ್ಕೆ ಇದನ್ನ ಬರೆದಿರುವೆ. ಪ್ರೀ ಆದಾಗ ಓದ ಮನಸ್ಸಾದರೆ ಮಾತ್ರ ಮುಂದೆ ಒಮ್ಮೆ ಓದು.

ನಿಂಗೆ ನೆನಪಿದ್ದ ಅವಾಗ ಮೊಸ್ಟ್ಲಿ ಇನ್ನು ಪಿಯು ಕಾಲೇಜು ಇಬ್ರಿಗು ಯಾರು ಹೇಳದು ಗೊತ್ತಿತ್ತಿಲ್ಲೆ. ಬಟ್ ಸ್ವಲ್ಪ ದಿನಾ ಅದ್ಮೇಲೆ ಗೊತ್ತಾತು. ಬಟ್ ಇಬ್ರು ಫ್ರೆಂಡ್ ಆಗಿದ್ದು ಮಾತ್ರ ಡಿಗ್ರಿಗೆ ಹೊದ್ಮೆಲೆ. ಅಲ್ಲಿಂದ ಇಬ್ರ ಫ್ರೆಂಡ್ ಶಿಪ್ ರಾಶಿ ಚೋಲೊ ಬಿಲ್ಡ್ ಅತು. ಬಟ್ ಅವಾಗ ಅವಾಗ ಕಚ್ಕತ್ತಾ,‌ ಜಗಳ ಆಡ್ತಾ ಇದ್ದು ಅಗಿರ್ತಿತ್ತು. ಆದ್ರು ಮತ್ತೆ ಸರಿ ಅಗ್ತಿದ್ದ. ಆದ್ರೆ ಎಂತಕ್ಕೆ ಈ ಸಲ ಜಗಳ ಆಗೋದ್ರು ಸುಮಾರು ತಿಂಗಳ ಅತು ಮಾತು ಕಥೆ ಏನಿಲ್ದೆ. ಇರಲಿ ನಂಗೆ ಅರ್ಥಾಗ್ತು ನಿಂಗೆ ಈಗ ನನಗಿಂತ ಮೇನ್ ಅಗಿ ಒಂದು ಫ್ಯಾಮಿಲಿ ಹೇಳಿ ಅಜು. ಅದಕ್ಕೆ ಹೆಚ್ಚು ಇಂಪಾರ್ಟೆಂಟಿಸಿ ಕೊಡವ್ ಹೇಳದು. ಓಕೆ ಐ ನೋ.

ಆದ್ರೆ ಒಂದ್ಸಲಾ ಹಳೆದು ನೆನಪು ಮಾಡ್ಕ. ಅವಾಗ ಎಲ್ಲಾ ಎಷ್ಟು ಚೊಲೋ ಇದ್ದಾಗಿತ್ತು. ನಂಗೆ ಚೊಲೋ ಇತ್ತು. ಬಟ್ ನಿಂಗೆ ಗೊತ್ತಿಲ್ಲೆ. ಆದ್ರೆ ಬೆಂಗಳೂರಿಗೆ ಬಂದ್ಮೇಲೆ ಹೆಂಗೆ ಇದ್ದಾಗಿತ್ತು. ಅವಾಗ ನಂಗೆ ನಿನ್ನ ಕೇರ್ ಮಾಡ್ಕಳವ್, ಒಬ್ನೆ ಇದ್ದೆ ಎಲ್ಲಾ‌ ಅನ್ಸಿತ್ತು. ಎಂತಕ್ಕೆ ಅಂದ್ರೆ ನಂಗೆ‌ ನೀನು ಹೆಂಗೆ ಹೇಳದು‌ ಗೊತ್ತಿತ್ತು. ಅದಕ್ಕೆ ಬ್ಯಾಡಾ‌ ಅಂದ್ರು ಒಂಥರ‌ ಕೆಲವೊಂದು ವಿಷಯದಲ್ಲಿ ರಾಶಿ ಕೇರ್ ಮಾಡವ್ ಅನ್ಸಿತ್ತಿತ್ತು. ಇದ್ದಷ್ಟು ದಿನ ನಿನ್ನ ವಿಷಯದಲ್ಲಿ ಹಂಗೆ‌‌ ಇದ್ದಿದ್ದೆ ಅನ್ಕತ್ತೆ.

ಮೊಸ್ಟ್ಲಿ ಅದೆಯಾ ಮುಂದೆ ಬೇರೆ‌ ರೀತಿ ಅನ್ಸಲೆ ರೀಸನ್ನಾತನ ಕಾಣ್ತಿದ್ದು. ಯಾವಾಗ ನೀನು‌ ಜಸ್ಟ ಫ್ರೆಂಡ್ ಅನ್ಕಳದೆ‌ ಇನ್ನು ಹೆಚ್ಚು ಅನ್ಕಂಡನ್ನ ಅದು‌‌ ನಾನು‌‌ ಮಾಡಿದ್ದು ಫಸ್ಟ್ ತಪ್ಪು ಅನಸ್ತಿದ್ದು. ನಿನ್ಮ ಫಿಲಿಂಗ್ ಏಂತಾ ಹೇಳದ‌ ಥಿಂಕ್‌ ಮಾಡಿದ್ನೆ ಇಲ್ಲೆ. ಅದು ಅಗಿದ್ದಕ್ಕೆ ಈಗ ಹಿಂಗಿದ್ದಾಜು. ಇರಲಿ ನಾನು ಮಾಡಿದ್ದು ತಪ್ಪಿಗೆ ನಂಗೆ ಬೇಜಾರಜು. ಬಟ್‌ ನೀನು ಖುಷಿ ಅಗಿ ಇದ್ಯಲೆ ನಂಗೆ‌ ನಿಜಾ ಅಷ್ಟು ಸಾಕು. ಹಿಂಗೆಯಾ‌ ಯಾವಾಗ್ಲು ನೀನು‌ ಹ್ಯಾಪಿ‌ ಅಗಿ ಇದ್ರೆ‌ ಸಾಕು‌ ನಂಗೆ. ಹಂಗೆ ಇರ್ತೆ ಅನ್ಕಂಜೆ. ಇರವು ನೋಡ್ಕ.

ಆದ್ರು ರಾಶಿ ನೆನಪಾಗ್ತಾ ಇರ್ತೆ. ಗೊತ್ತಿಲ್ಲೆ ಎಂತಕ್ಕೆ ಹೇಳಿ.‌ ಲೈಪ್ ಒಂಥರಾ‌ ಆಫಿಸ್ ಬಿಟ್ರೆ ರೂಂ ಇಷ್ಟೆ ಆಜು. ಅವಾಗ‌ ನೀನಾದ್ರು ಇದ್ದಿದ್ದೆ. ಬಟ್ ಈಗಾ ಯಾರು ಇಲ್ಲೆ  ಒಬ್ನೆಯಾ ಆಜೆ. ಬೇಜಾರಾದ್ರು ಒಬ್ನೆ, ಖುಷಿ ಆದ್ರು ಒಬ್ನೆ. ಹೇಳ್ಕಳಲೂ ಯಾರಿಲ್ಲೆ. ಆದ್ರೆ ಅದು ಒಂಥರಾ ರೂಡಿ ಅಗ್ತಿದ್ದು. ಈಗ ನಾನು ಮಾತಾಡ್ತ್ನಿಲ್ಲೆ, ನೀನು ಮಾತಾಡ್ಸಿದ್ರು ಅಷ್ಟಕ್ಕೆ ಅಷ್ಟೆ ತರಾ ಇದ್ದೆ ಹೇಳಿ ಅನ್ಕತ್ತಿದ್ರೆ ಅದು ಹೌದು. ಯಾವುದಕ್ಕೂ ಮನ್ಸಿಲ್ಲೆ. ಸದ್ಯ ಇದ್ದೆ ನಾನು ಅಷ್ಟೇ ಬಿಟ್ರೆ ಬೇರೆ ಏನು ಇಲ್ಲೆ ಹೇಳವಾಂಗೆ ಅಜು. ನಾನು ಪ್ರೆಂಡ್ಶಿಪ್ಪಾ ಹಂಗೆ ಇಟ್ಕಳಕಿತ್ತು. ಬಿಟ್ಡು ಅದನ್ನಾ ಬೇರೆ ತರ ನೋಡ್ನನ ಅಲ್ದ. ಯಾವ್ದು ಹೇಳಿ ಅರ್ಥ ಅಗಿಕ್ಕು. ಅದಕ್ಕೆ ಈಗ್ಲು ಸ್ವಾರಿ ಕೇಳ್ತೆ. ಬೇಜಾರ ಆದಾಗೆಲ್ಲಾ ನಿನ್ನ ಪಿಜಿ ಹತ್ರದ್ ಪಾರ್ಕ್ ಗೆ ಹೋಗಿ ಬಂಜೆ. ರಾಶಿ ನೆನಪಿದ್ದು ಅಲ್ಲಿ ನಂಗಂತುವಾ. ರಾಶಿ ಮಿಸ್ ಮಾಡ್ಕತ್ತೆ ಆ ಜಾಗಾವಾ ಸಂತಿಗೆ ಅವಾಗ ಇದ್ದವರನ್ನ.

ಸ್ವಾರಿನೇ.... ನನ್ಮಿಂದಾ ಏನ್ ಬೇಜಾರಾದ್ರು ಸದ್ಯಕ್ಕೆ ಸ್ವಾರಿ ಬಿಟ್ಟು ಬೇರೆ ಎಂತಾ ಹೇಳಲಾಗ್ತಿಲ್ಲೆ. ಹೆಚ್ವು ಅನ್ಸಲ್ಕು ಬಟ್ ಎಲ್ಲಾದ್ರು ದಿನಕ್ಕೆ ಒಂದ್ಸಲಾ ಆದ್ರು ನೆನಪಾಗ್ತಿರ್ತೆ. ಇದನ್ನೆಲ್ಲಾ ಹೇಳ್ಯಿರದು ಅದು ಈಗ ಎಷ್ಡು ಸರಿ‌ ಗೊತ್ತಿಲ್ಲೆ. ಈಗಾ ಮೊದ್ಲಿನಂಗೆ ಅಲ್ಲಾ ನೀನು. ನಿಂಗೆ ನಿಂದೆಯಾ ಒಂದು ಸಂಸಾರ ಇದ್ದು. ಹಳೆದು ಅದ್ರಲ್ಲೂ ಕೆಲವೊಂದು ವಿಚಾರ ನೆನಪು ಮಾಡಿದ್ದು ತಪ್ಪು ಅನ್ಸತು. ಸ್ವಾರಿ ಬಟ್ ಹೇಳವು ಅನ್ಸತು ಅದಕ್ಕೆ ಹೇಳದೆ ಅಷ್ಡೆಯಾ. ನನ್ನ‌ ಬರ್ತಡೇ ದಿನ ಆಗಿದ್ದು ಮೊಸ್ಡ್ಲಿ ಮರೆಯಲಾಗ್ತಿಲ್ಲೆ ನಂಗೆ. ಬ್ಯಾಡ ಅಂದ್ರು ವರ್ಷಕ್ಕೆ ಒಂದ್ಸಲಾ ಆದ್ರೂ ನೆನಪಾಗ್ತು ಬಿಡು. ಅವತ್ತು ನಂಗೆ ಹೇಳಿ ನೀನು ತಂದಿದ್ದಾ ಕಡಿಗೆ ನಾನು ಹೇಳದವಕ್ಕೆ ಕೊಟ್ಟಿರ್ತೆ ಅನ್ಕಂಜೆ. ರಾಶಿ ಆತನ ಅಲ್ದ ಹೇಳಿದ್ದು. ಒನ್ಸ್ ಅಗೈನ್ ಸ್ವಾರಿ. ಹಳೆದು ಅಗಿದ್ದಕ್ಕೆ ಎಲ್ಲವಾ. ಅದೆಲ್ಲಾ ಏನಾದ್ರು ನೆನಪಿದ್ರೆ ಮರ್ತೋಗು ಅದೇ ಚೊಲೋನನ ನಿಂಗೆ. ಇಷ್ಡು ಹೇಳಿದ್ರಲ್ಲಿ ನಿಂಗೆ ಅವತ್ತಿಂದ ನಾನು ಎಂತಕ್ಕೆ ಹಂಗೆ ಇದ್ದೆ ಹೇಳದು ಅರ್ಥ ಅಜು ಅನ್ಕತ್ತೆ. ಖುಷಿಯಾಗಿರು ಯಾಗ್ಲುವಾ ಸಂತಿಗೆ ನಿನ್ನ ನನಗಿಂತಾ ರಾಶಿ‌‌‌‌ ಇಷ್ಟಪಟ್ಟು ಕೇರ್ ಮಾಡವಿದ್ದ. ಅವನ್ನಾ ಖುಷಿಂದಾ‌ ನೋಡ್ಕ. ಆ ಇನ್ಸಿಡೆಂಟ್ ಆದ್ಮೆಲೆ ಕೆಲವೊಂದು ಹೇಳಲಾಗದ್ದ‌ ಹೇಳದೆ ಈಗಾ. ಸಂತಿಗೆ ಬರ್ತಡೇ ವಿಶ್ ಮಾಡಿದ್ನಲ್ಲೆ ಅದಕ್ಕೆ ಈಗಾ ಹ್ಯಾಪಿ ಬರ್ತಡೇ ಪೆದ್ದು. ಅದಲ್ದೆ‌ ಹ್ಯಾಪಿ‌ ಮ್ಯಾರಿಡ್‌ ಲೈಫ್. ಖುಷಿಯಾಗಿರು.


                                                 ಮಿಸ್‌ ಯು ಪೆದ್ದು........

Comments

Popular posts from this blog

ನೆನಪುಗಳ ಬುಟ್ಟಿ ತೆರೆದಾಗ

ಮನದ ಭಾಷ್ಯವಿದು....