ನೆನಪುಗಳ ಬುಟ್ಟಿ ತೆರೆದಾಗ

 ತುಂಬಾ ದಿನಗಳಾಗಿತ್ತು ಬರವಣಿಗೆ ಎನ್ನುವುದಕ್ಕೆ ಕೈ ಹೊರಳದೆಯೆ. ಏಕೋ ಗೊತ್ತಿಲ್ಲ ಬರಯಬೇಕು ಎನ್ನುವ ಕಿಂಚಿತ್ತು ಮನಸ್ಸು ಮೂಡಲಿಲ್ಲ. ಕೆಲವೊಂದು ನನ್ನೊಳಗಿನ ತೊಳಲಾಟಗಳೋ ಅಥವಾ ಯಾವ ವಿಷಯವೂ ಸಿಗಲಿಲ್ಲವೋ ನಾನರಿಯೆ ಒಟ್ಟಿನಲ್ಲಿ  ಬೆರಳುಗಳು ಕೇವಲ ಮೊಬೈಲ್ ಕೀ ಬೋರ್ಡ್ ಗಳನಷ್ಟೇ ಕುಟ್ಟುತ್ತಿದ್ದವು. ಇಷ್ಟು ವರುಷಗಳ‌ ಕಾಲ ಜೊತೆಗಾರನಂತಿದ್ದ ಬರಹದ ಮೂಲವಾದ ಲೇಖನಿಯು ಅದ್ಯಾವುದೋ ಮೂಲೆಯಲ್ಲಿ ತನ್ನ ಅಸ್ಥಿತ್ವವೇ ಮುಗಿದಂತೆ ಸದ್ದಿಲ್ಲದೆ ಮಲಗಿತ್ತು. ಎಷ್ಟು ದಿನ ಅಂತಾ ಮೂಲವನ್ನು ಮರೆತು ಬದುಕುವುದು ಮತ್ತೆ ನೆನಪಾದ ಲೇಖನಿಯನ್ನು ಕೈಗೆತ್ತಿಕೊಂಡು ಬರಯಲಾರಂಭಿಸಿದೆ ಆದರೆ ಏನು ಬರೆಯುವುದು ಎನ್ನುವುದೇ ಹೊಳಯದಾಗ‌ ನೆನಪಾದ್ದು ಕೆಲವೊಂದು ಸಂಗತಿಗಳು ನನ್ನ ಭಾಷೆಯಲ್ಲಿ ಬರೆದರೆ ಸೂಕ್ತ  ಎನಿಸಿತು ಎಂದು ಮುಂದೆ ಬರುವ ಕೆಲ ವಿಷಯಗಳನ್ನು ಬರೆದಿರುವೆ ಕೆಲವೊಂದು ವಿಚಾರಗಳನ್ನು ನಾನು ನೋಡಿದ ಹಾಗೇ ಇದೊಂದು ಪೀಠಿಕೆ ಎನ್ನಬಹುದು ಅಷ್ಟೆ ಮುಂದಿನ ಸಾಲುಗಳಿಗೆ. 

  ಕೆಲವೊಂದು ವಿಷಯಗಳೇ ಹಾಗೆ ಕೆಲವೇ ದಿನಗಳಲ್ಲಿ ಮನದ ಆಳಕ್ಕೆ ಇಳಿಯುತ್ತವೆ ಹಾಗೇ ಅಳಿದು‌ ಹೊಗುತ್ತದೆ. ಆದರೆ ಇನ್ನೂ ಕೆಲವೊಂದು ನಮ್ಮದು ಎಂಬ ವಿಷಯ ಮನಸ್ಸಿಗೆ ಬರುವುದಕ್ಕೆ ತಡವಾದರೂ ಅಲ್ಲಿ ಬಹುದಿನಗಳವರೆಗೆ ಉಳಿದು ಹೋಗುತ್ತದೆ. ಹಲವಾರು ದಿನಗಳಿಂದ ಹುಡುಕುತ್ತಿದ ನನ್ನ ದಾರಿಯು ಕಂಡದ್ದು ಪ್ರಪಂಚದ ಎಲ್ಲಾ  ಹಾದಿಗಳು ನಿರ್ಜನವಾದಾಗ ಅಂದರೆ ಬಯಲು ಸೀಮೆಯಲ್ಲಿ ಮುಂಗಾರು ಬಂದಂತೆ. ಯಾವುದಕ್ಕು ಸಂಬಂಧವಿಲ್ಲ ಒಟ್ಟಿನಲ್ಲಿ ದಾರಿ ಕಂಡುಕೊಂಡೆ ಎಂಬ ಭಾವ ಆಗಷ್ಟೇ ಅನಿಸಿತ್ತು. ಹಾದಿ ಸಿಕ್ಕಿದಲ್ಲ ಇನ್ನು ಕ್ರಮಿಸಲು ಪ್ರಾರಂಭಿಸಬೇಕಿತ್ತು ಆ ಪ್ರಾರಂಭಕ್ಕೆ ಮೊದಲ ಹೆಜ್ಜೆ ಇಟ್ಟಿದ್ದು ಮಲೆನಾಡ ಮಳೆಗಾಲದಲ್ಲಿ. ಅದು ನನ್ನದೇ ಇನ್ನೊಂದು ಮನೆಯಲ್ಲಿ ಎಂದರೂ ತಪ್ಪಾಗಲಾರದು. ಹೌದು ಈ ಸಾಲುಗಳು ಹೇಳುವ ಮೊದಲು ಅದು‌ ಕೇವಲ ಸಂಬಂಧಿಗಳ ಮನೆ ಸಹಜ ಮುಜುಗರ, ಆಗಾಗ ಚಿಕ್ಕದಾದ ನಾಟಕೀಯ ಸಂಕೋಚ. ಏನೋ ಬೇಕು‌ ಆದರೆ ಹೇಗೆ‌ ಹೇಳಲಿ ಎನ್ನುವ ತೊಳಲಾಟ. ಎಷ್ಟಾದರೂ ಅದು ನನ್ನ ಮನೆಯಲ್ಲ. ಆದರೆ ಈ ಆಲೋಚನೆ ತುಂಬಾ ದಿನಗಳ ವರೆಗೆ ನನ್ನಲ್ಲಿ ಉಳಿಯಲು ಅವರು ಬಿಡಲಿಲ್ಲ. ಅಲ್ಲಿ ಎಲ್ಲವೂ ನನ್ನದಾಯಿತು ಎಲ್ಲರೂ ನನ್ನವರಾದರು ಎಷ್ಟರ ಮಟ್ಟಿಗೆ ಎಂದರೆ ಹೊದ ವಾರದೊಳಗೆ ಮನೆಯ ನೆನಪು ಕ್ಷಿಣಿಸುವಷ್ಟು ಎಂದರೂ ಅತಿಕ್ಷಯೋಕ್ತಿಯೇ. ಹರಿದ ಅಂಗಿಗೆ ಹುಲಿಗೆ ಹಾಕುದರಿಂದ ನನ್ನೊಳಗಿನ ಎಲ್ಲಾ ಸಂಕೋಲೆಗಳಿಗೂ ಹುಲಿದು ಒಂದೆಡೆ ಬಿಸಾಡಿದವಳು ಅಕ್ಕಾ ಅಲ್ಲಿಂದ ನನ್ನ ಮನೆಯ ಪ್ರಪಂಚಕ್ಕೆ ಪ್ರವೇಶಿಸಿದೆ. ಇನ್ನೂ ಹಸಿರು ಬಿಸ್ಕಿಟ್ ( ಕೊಡ್ ವರ್ಡ್)  ಇಂದ ಶುರುವಾದ ತಮ್ಮನೊಂದಿಗಿನ ಆರಂಭ ನಂತರ ಮನೆಯ ಇನ್ನೊಂದು ಮಜಲನ್ನು ತೆರೆದಿತ್ತು. ನನ್ನ ವಯೋಮಾನದ ಹೊರತಾಗಿಯೂ ಚಿಕ್ಕೂಸ್ ಎನ್ನುತ್ತಲೇ ಅವಳಿಂದ ಅಮ್ಮನ ಪ್ರೀತಿಯು ದೊರಕಿತು. ನನಗಂತೂ ಮನೆಯ ಅಜ್ಜಿಯ ಮಮತೆ ಗೊತ್ತಿಲ್ಲದಿದ್ದರೂ ಇದ್ದ ಕೆಲ ದಿನಗಳಲ್ಲೆ ನನಗೂ ಮನೆಯಲ್ಲೊಂದು ಈ ತೆರೆನದಾವ ಹಿರಿಯ ಜೀವ ಬೇಕಿತ್ತು ಅವರೊಂದಿನ ಸಿಟ್ಟು, ಪ್ರೀತಿ ಎಲ್ಲವನ್ನೂ ಒಟ್ಟಿಗೆ ಮನದಲ್ಲಿಯೇ ಅನುಭವಿಸುವ ಅನುಭವವನ್ನು ನೀಡಿದಳು ಆ ಹಿರಿಯ ಜೀವ. ಇಷ್ಟೆಲ್ಲಾ ಹೇಳಿದ ಮೇಲೆ ಅಲ್ಲಿಯ ಮನೆಯ ಮೂಲ ಬೇರಾದ ಕಾಕನ್ನು‌ ಆತನ ಹವಾಮಾನದ ವರದಿಯನ್ನು ಎಂದಿಗೂ ಮರೆಯಲಾರದು ಮಳೆ ಬಂದಾಗಲೆಲ್ಲಾ‌ ನೆನಪಾಗುವ ಪ್ರತಿಭೆಯದು.‌ ಒಂದರ್ಥದಲ್ಲಿ ಹೊಸ ಮನೆಯ ಪಿಲ್ಲರ್ ಎನ್ನಬಹುದು ಮೊಕ್ತೆಸರರನ್ನು. ಈ ಪಂಚ ಪಾತ್ರಗಳು ಮೊದಲಿನಿಂದಲೂ ನನ್ನ ಸುತ್ತಲೇ ಇದ್ದರೂ ಇಂದು‌ ಸುತ್ತಲಲ್ಲಾ ಪಕ್ಕದಲ್ಲೇ ಇರುವಂತಾಗಿದ್ದು ಆ ಕೆಲ ದಿನಗಳು ಕಳೆದ ಅಲ್ಲಿಯ ನೆನಪುಗಳು.  ಬರೆಯುತ್ತಾ ಹೋದರೆ ಇನ್ನಷ್ಟು ಬರೆಯಬಹುದು ಆದರೆ ಅದು ಕೇವಲ ಹೇಳಿಕೆಗಳಾಗಿ ಹೋಗುತ್ತದೆ ಎನ್ನುವ ಭಾವ ಮುಡುತ್ತಿದೆ. ಎಲ್ಲರ ನೆನಪುಗಳನ್ನು ಮನಸಾರೆ ಹೇಳುವುದಕ್ಕಿಂತ ಬರವಣಿಯ ಶಬ್ದಗಳು ಇನ್ನಷ್ಟು ಮನವ ನೆನಪುಗಳಿಗೆ ರೆಕ್ಕೆ ತರುತ್ತದೆ ಎಂದನಿಸಿ ಬರೆದಿರುವೆ. ಈ ಬರವಣಿಗೆಯ ನೈಜ ಅರ್ಪಣೆಯೂ ಇವರೂಗಳೆಗ ಸಲ್ಲುತ್ತದೆ. ಧನ್ಯವಾದ ಹೇಳಿ ಮತ್ತೆ ಸಂಬಂಧಿಕನಾಗಲು ಬಯಸುವುದಿಲ್ಲ ಏಕೆಂದರೆ ಈಗ ನಾನು ನಿಮ್ಮ ಮನೆಯವನೆ ಅದಕ್ಕಾಗಿ ............

                                                                       ಇಂತಿ ನಿಮ್ಮವ
                                                                         ಅನಿಲ್ ಭಟ್

   

Comments

Popular posts from this blog

ಸ್ವಾರಿ..ಹೇಳಿ ಉಳಿದ ಮಾತು

ಮನದ ಭಾಷ್ಯವಿದು....