ಸ್ಯಾಂಡ್ ವುಡ್ ದಾಖಲೆಗಳಿಗೆ ಭಾಷ್ಯವಿದು
ಯಾವುದೇ ಒಂದು ಕ್ಷೇತ್ರಕ್ಕೂ ಆರಂಭ ಎನ್ನುವುದು ಅತ್ಯಂತ ಮುಖ್ಯಮಾಗಿರುತ್ತದೆ. ಅಂತೆಯೇ ಅನೇಕ ಮೊದಲುಗಳಿಗೂ ಅವುಗಳು ಸಾಕ್ಷಿಯಾಗಿರುತ್ತದೆ. ಹಾಗೇ ಕನ್ನಡ ಸಿನಿಮಾ ರಂಗದಲ್ಲಿ ಅದೆಷ್ಟೋ ಸಿಮಾಗಳು ನಮ್ಮೆದುರು ಬಂದು ಹೋಗಿವೆ ಕೆಲವೊಂದು ಇನ್ನು ಮನದಲ್ಲಿ ಹಾಗೆ ಅಚ್ಚಳಿಯದಂತೆಯೆ ಉಳಿದಿವೆ. ಅವುಗಳಲ್ಲಿ ಕೆಲ ಸಿನಿಮಾಗಳು ಚಂದನವನಕ್ಕೆ ಹೊಸ ಆರಂಭವನ್ನು, ಹೊಸ ಭಾಷ್ಯವನ್ನು, ದಾಖಲೆಗಳನ್ನು ಮಾಡಿವೆ.ಅಂತಹ ಕೆಲವೊಂದು ವಿನೂತನ ದಾಖಲೆಗಳನ್ನು, ಪ್ರಾರಂಭವನ್ನು ಮಾಡಿದಂತಹ ಚಿತ್ರಗಳು ಜನಮನದಲ್ಲಿ ಉಳಿದಿವೆ ಅಂತಹ ಕೆಲ ಸಿನಿಮಾಗಳನ್ನು ನೀವು ಯಾವುದೆಂದು ನೋಡಿ. ಹೌದು ಎಲ್ಲದಕ್ಕೂ ಒಂದು ಪ್ರಾರಂಭ ಎನ್ನುವುದಿರುತ್ತದೆ ಹಾಗೇ ಸ್ಯಾಂಡಲ್ ವುಡ್ ನಲ್ಲಿ ಮೊದಲು ತೆರೆಕಂಡ ಸಿನಿಮಾವೆಂದರೆ ಅದು 'ಮೃಚ್ಛಕಟಿಕ' ಇದು ಒಂದು ಮೂಕಿ ಚಿತ್ರವಾಗಿದ್ದು 1931ರಲ್ಲಿ ತೆರೆಕಂಡಿತ್ತು. ಆದರೆ ಮೊದಲ ಟಾಕಿ ಚಿತ್ರ ಎಂದರೆ ವೈ.ವಿ ರಾವ್ ನಿರ್ದೇಶನದ 'ಸತಿ ಸುಲೋಚನ' ಇದು 1934ರಲ್ಲಿ ತೆರೆಕಂಡಿದ್ದು ಇದರಲ್ಲಿ ಸುಬ್ಬಯ್ಯ ನಾಯ್ಡು ನಾಯಕನಾಗಿ ಅಭಿನಯಿಸಿದ್ದರು. ಆದರೆ ಈ ಚಿತ್ರದಿಂದ ಕನ್ನಡ ಸಿನಿರಂಗ ಪ್ರಾರಂಭವೆಂದು ಹೇಳುವುದು ಉಂಟು. ಇನ್ನು ಕನ್ನಡದ ಹೆಮ್ಮೆ ನಮ್ಮ ವರನಟ ರಾಜಕುಮಾರ್ ಕನ್ನಡ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದ ಮೊದಲ ಚಿತ್ರ 'ಬೇಡರಕಣ್ಣಪ್ಪ'. ಕನ್ನಡ ಸಿನಿಮಾ ಒಂದಕ್ಕೆ ಈ ಚಿತ್ರದ ಮೂಲಕ...